ನಮಸ್ಕಾರ ಸ್ನೇಹಿತರೆ ! ಇವತ್ತಿನ ಈ ಒಂದು ಲೇಖನಕ್ಕೆ ನಿಮಗೆಲ್ಲರಿಗೂ ಸ್ವಾಗತ ! ಪ್ರಸ್ತುತ ಈ ಲೇಖನದಲ್ಲಿ ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಸಿಗುವ 10 ಯೋಜನೆಗಳ ಬಗ್ಗೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಲಾಗಿದೆ. 10 Schemes For Womens
ಸ್ನೇಹಿತರೆ ನಿಮಗೆಲ್ಲ ತಿಳಿದಿರುವ ಹಾಗೆ ಕೇಂದ್ರ ಸರ್ಕಾರವು ದೇಶದ ಮಹಿಳೆಯರಿಗಾಗಿ ಈಗಾಗಲೇ ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ. ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಸಾಕಷ್ಟು ಯೋಜನೆಗಳ ಪೈಕಿ ದೇಶದಲ್ಲಿರುವ ಹಲವಾರು ಮಹಿಳೆಯರು ಈಗಾಗಲೇ ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ಜಾರಿಗೆ ತಂದಿರುವ ಯೋಜನೆಗಳ ಲಾಭವನ್ನು ಪಡೆದುಕೊಂಡಿದ್ದಾರೆ.
ಆದರೆ ನಮ್ಮ ದೇಶದಲ್ಲಿ ಇನ್ನೂ ಕೆಲ ಮಹಿಳೆಯರಿಗೆ ಕೇಂದ್ರ ಸರಕಾರದಿಂದ ಸಿಗುವಂತಹ ಯೋಜನೆಗಳ ಬಗ್ಗೆ ವಿಶೇಷವಾಗಿ ಕೇಂದ್ರ ಸರ್ಕಾರದಿಂದ ಮಹಿಳೆಯರಿಗಾಗಿ ಯಾವ ಯಾವ ಯೋಜನೆಗಳು ಜಾರಿಗೆ ಬಂದಿದೆ ಎಂಬುದರ ಬಗ್ಗೆ ತಿಳಿದೇ ಇಲ್ಲ. ಅಂತಹ ಮಹಿಳೆಯರಿಗಾಗಿ ಇವತ್ತಿನ ಈ ಒಂದು ಲೇಖನದಲ್ಲಿ ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಸಿಗುವಂತಹ 10 ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಲಾಗಿದೆ.

ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಸಿಗುವ 10 ಯೋಜನೆಗಳ ಬಗ್ಗೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಪಡೆಯಲು ಇವತ್ತಿನ ಈ ಒಂದು ಲೇಖನವನ್ನು ತಪ್ಪದೆ ಕೊನೆಯವರೆಗೂ ಓದಿ… ಏಕೆಂದರೆ ಈ ಒಂದು ಲೇಖನದಲ್ಲಿ ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಸಿಗುವ ಯೋಜನೆಗಳ ಬಗ್ಗೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಲಾಗಿದೆ. ಅರ್ಧಂಬರ್ಧ ಓದಿದರೆ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ನಿಮಗೆ ತಿಳಿಯುವುದಿಲ್ಲ…
ಸ್ನೇಹಿತರೆ ಇದೇ ರೀತಿ ನಾವು ದಿನನಿತ್ಯ ಸರ್ಕಾರಿ ಯೋಜನೆಗಳ ಬಗ್ಗೆ ಹಾಗೂ ಸರಕಾರಿ ಹುದ್ದೆಗಳ ಬಗ್ಗೆ ಮತ್ತು ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವಂತಹ ವಿವಿಧ ಹುದ್ದೆಗಳ ಬಗ್ಗೆ ನಮ್ಮ karnatakabindu.in ಜಲತನದಲ್ಲಿ ಲೇಖನದ ಮೂಲಕ ಮಾಹಿತಿಯನ್ನು ನೀಡುತ್ತೇವೆ. ನಮ್ಮ ಲೇಖನವನ್ನು ಎಲ್ಲರಿಗಿಂತ ಮುಂಚಿತವಾಗಿ ಓದಲು ನೀವು ಬಯಸಿದರೆ ತಪ್ಪದೆ ನಮ್ಮ ವಾಟ್ಸಾಪ್ ಗ್ರೂಪ್ ಅನ್ನು ಜಾಯಿನ್ ಆಗಿ…
ಬೇಟಿ ಬಚಾವೋ , ಬೇಟಿ ಪಡಾವೋ ಯೋಜನೆ :
ಸ್ನೇಹಿತರೆ ಕೇಂದ್ರ ಸರ್ಕಾರದ ಹಲವಾರು ಯೋಜನೆಗಳಲ್ಲಿ ಈ ಬೇಟಿ ಬಚಾವೋ , ಭೇಟಿ ಪಡಾವೋ ಯೋಜನೆಯು ಒಂದು ಪ್ರಮುಖ ಯೋಜನೆಯಾಗಿದೆ. ಈ ಯೋಜನೆಯನ್ನು 2015ರಲ್ಲಿ ಅಂದಿನ ಹಾಗೂ ಪ್ರಸ್ತುತ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಜಾರಿಗೆ ತಂದರು. ಈ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಉತ್ತೇಜಿಸುವುದಾಗಿದೆ. ನಮ್ಮ ಸಮಾಜದಲ್ಲಿರುವ ಹೆಣ್ಣು ಮಕ್ಕಳ ಮೇಲಿನ ಅಪಸ್ವರವನ್ನು ತೆಗೆದುಹಾಕಿ ಸಮಾನತೆ ದೃಷ್ಟಿಕೋನವನ್ನು ಬೆಳೆಸುವ ಮಹತ್ವದ ಯೋಜನೆ ಇದಾಗಿದೆ.
ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ :
ಮಾತೃತ್ವದ ಅವಧಿಯಲ್ಲಿ ಆರ್ಥಿಕ ಭದ್ರತೆಯನ್ನು ನೀಡುವ ಯೋಜನೆ ಇದಾಗಿದೆ. ಈ ಯೋಜನೆಯನ್ನು ಕೇಂದ್ರ ಸರ್ಕಾರವು 2017ರಲ್ಲಿ ಜಾರಿಗೆ ತಂದಿದೆ. ಈ ಮಾತೃ ಯೋಜನೆಯಡಿ ಮೊದಲ ಬಾರಿಗೆ ತಾಯಿಯಾದಂತಹ ಮಹಿಳೆಯರಿಗೆ 5000 ನೆರವನ್ನು ನೀಡಲಾಗುತ್ತದೆ.
ಮಹಿಳಾ ಶಕ್ತಿ ಕೇಂದ್ರ ಯೋಜನೆ :
ಗ್ರಾಮೀಣ ಪ್ರದೇಶದಲ್ಲಿ ಇರುವಂತಹ ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ಅರವಿನೊಂದಿಗೆ ಆರ್ಥಿಕ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಗಳನ್ನು ಸಾಧನೆ ಮಾಡಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರವು 2017ರಲ್ಲಿ ಈ ಮಹಿಳಾ ಶಕ್ತಿ ಕೇಂದ್ರ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯು ಮಹಿಳೆಯರಿಗೆ ಉದ್ಯಮಶೀಲತೆ ಮತ್ತು ಸ್ವ ಉದ್ಯೋಗವನ್ನು ಮಾಡಲು ತರಬೇತಿಯನ್ನು ನೀಡುತ್ತದೆ.
ಸುಕನ್ಯಾ ಸಮೃದ್ಧಿ ಯೋಜನೆ :
ಈ ಯೋಜನೆ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಉಳಿತಾಯದ ಹಾಗೆ ನಿರ್ಮಿಸುತ್ತದೆ. ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳ ಹೊಂದಿರುವವರಿಗೆ ಅವರ ಹೆಸರಿನಲ್ಲಿ ಬ್ಯಾಂಕ್ ಖಾತೆಯನ್ನು ತೆರೆದು ಮತ್ತು ಸರ್ಕಾರವು ಆಕರ್ಷಕರ ಬಡ್ಡಿದರರನ್ನು ನೀಡುತ್ತದೆ. ಇದರಿಂದ ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮದುವೆಗಾಗಿ ತಕ್ಕಮಟ್ಟಿಗೆ ಹಣವನ್ನು ಕೂಡಿಟ್ಟಂತಾಗುತ್ತದೆ.
ಉಜ್ವಲ ಯೋಜನೆ :
ಕೇಂದ್ರ ಸರ್ಕಾರದ ಹಲವಾರು ಯೋಜನೆಗಳಲ್ಲಿ ಈ ಉಜ್ವಲ ಯೋಜನೆಯು ಅತಿ ಮುಖ್ಯವಾದ ಯೋಜನೆಯಾಗಿದೆ. ಈ ಉಜ್ವಲ ಯೋಜನೆಯನ್ನು 2015ರಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆಯನ್ನು ಜಾರಿಗೆ ತರಲು ಮೂಲ ಕಾರಣವೆಂದರೆ ಮಹಿಳೆಯರು ಒಲೆಯನ್ನು ಬೆಳೆಸದೆ LPG gas cylinder ಅನ್ನು ಬಳಸಿ ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಅಡುಗೆಯನ್ನು ಮಾಡಲು ಸಹಾಯ ಮಾಡುತ್ತದೆ. ಮತ್ತು ಈ ಯೋಜನೆ ಅಡಿ ಬಡ ಕುಟುಂಬದ ಮಹಿಳೆಯರಿಗೆ ಉಚಿತ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಅನ್ನು ನೀಡಲಾಗುತ್ತದೆ.
ಮಿಷನ್ ಇಂದ್ರ ಧನುಷ್ ಯೋಜನೆ :
ಈ ಯೋಜನೆಯನ್ನು ದೇಶದಲ್ಲಿರುವ ಮಹಿಳೆಯರು ಆರೋಗ್ಯದಿಂದ ಜೀವನವನ್ನು ನಡೆಸುವ ಉದ್ದೇಶದಿಂದ ಕೇಂದ್ರ ಬಿಜೆಪಿ ಸರ್ಕಾರವು ಜಾರಿಗೆ ತಂದಿದೆ.
ಕಿಶೋರೆ ಶಕ್ತಿ ಯೋಜನೆ :
ಈ ಕಿಶೋರಿ ಶಕ್ತಿ ಯೋಜನೆಯನ್ನು ಹದಿಹರೆಯದ ಹುಡುಗಿಯರಿಗೆ ಪೌಷ್ಟಿಕ ಆಹಾರ ಮತ್ತು ಜೀವನ ಕೌಶಲ್ಯ ತರಬೇತಿಯನ್ನು ನೀಡಲು ಜಾರಿಗೆ ತರಲಾಗಿದೆ.
ಮಹಿಳಾ ಇ ಹಾತ್ ಯೋಜನೆ :
2016ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲಾಯಿತು. ಈ ಯೋಜನೆಯನ್ನು ಡಿಜಿಟಲ್ ಪಾರ್ಟ್ ಫಾರ್ಮ್ , ಮಹಿಳಾ ಉದ್ಯಮಶೀಲತೆಯನ್ನು ಉತ್ತೇಜಿಸುವ , ಮತ್ತೊಮ್ಮೆಗಳನ್ನು ಆನ್ ಲೈನ್ ಗಳಲ್ಲಿ ಮಾರಾಟ ಮಾಡಲು ಈ ಯೋಜನೆ ಅವಕಾಶ ನೀಡುತ್ತದೆ.
ಸಖೀ ನಿವಾಸ ಯೋಜನೆ :
ಅಂತರ್ಜಾತಿಯ ಅಂತರಾಜ್ಯದ ದೂರದ ಊರುಗಳಲ್ಲಿ ಕೆಲಸ ಮಾಡುತ್ತಿರುವಂತಹ ಮಹಿಳೆಯರಿಗೆ ರಕ್ಷಿತ ವಾದ ಸ್ಥಳವನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ಒನ್ ಸ್ಟಾಪ್ ಸೆಂಟರ್ ಯೋಜನೆ :
ಈ ಯೋಜನೆಯನ್ನು ಮಹಿಳೆಯರು ಹಿಂಸೆಯಿಂದ ಮುಕ್ತರಾಗಲು ಕಾನೂನು ಮತ್ತು ವೈದ್ಯಕೀಯ ಮಾನಸಿಕ ಸಹಾಯವನ್ನು ಪಡೆಯಲು ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿದೆ.
ಸ್ನೇಹಿತರೆ ಮೇಲೆ ತಿಳಿದಿರುವ 10 ಯೋಜನೆಗಳು ಸರಕಾರದಿಂದ ಮಹಿಳೆಯರೇ ಸಿಗುವಂತಹ ಯೋಜನೆಗಳಾಗಿವೆ. ಈ ಹತ್ತಿ ಯೋಜನೆಗಳ ಲಾಭವನ್ನು ದೇಶದ ಎಲ್ಲಾ ಮಹಿಳೆಯರು ಪಡೆದುಕೊಳ್ಳಬಹುದು.