Ration Card:ರೇಷನ್ ಅಕ್ಕಿ ಮಾರಾಟ ಮಾಡಿದ್ರೆ ರದ್ದಾಗುತ್ತೆ ರೇಷನ್ ಕಾರ್ಡ್.! ರೇಷನ್ ಕಾರ್ಡ್ ಹೊಂದಿದವರಿಗೆ ಹೊಸ ರೂಲ್ಸ್ ಜಾರಿ.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ. 

ಈಗ ಪ್ರಸ್ತುತ ಇಂದಿನ ಒಂದು ಲೇಖನದಲ್ಲಿ ರೇಷನ್ ಕಾರ್ಡ್ ಹೊಂದಿದವರಿಗೆ ರಾಜ್ಯ ಸರ್ಕಾರ ಹೊಸ ರೂಲ್ಸ್ ಜಾರಿಗೆ ಮಾಡಿದೆ ಇದರ ಕುರಿತು ಇಂದಿನ ಒಂದು ಲೇಖನದಲ್ಲಿ ತಿಳಿಸಲಾಗಿದೆ ಈ ಲೇಖನವನ್ನು ಕೊನೆಯವರೆಗೂ ಓದಿ.

WhatsApp Group Join Now
Telegram Group Join Now

 ರಾಜ್ಯ ಸರ್ಕಾರ ಪಡಿತರ ಚೀಟಿದಾರರಿಗೆ ನೀಡುವ ಉಚಿತ ಆಹಾರಧಾನ್ಯವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಗಟ್ಟಲು ಇಂತಹ ಗಂಭೀರ ಕ್ರಮಗಳನ್ನು ಕೈಗೊಳ್ಳುತ್ತಿದೆ. 

ಇದರ ಮೇಲೆ ಕ್ಲಿಕ್ ಮಾಡಿ ಓದಿ:ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವವರಿಗೆ ಸಿಹಿ ಸುದ್ದಿ.!!ಕೇವಲ 18,000 ರೂ. ನಿಮ್ಮದಾಗಿಸಿಕೊಳ್ಳಿ River indie ಎಲೆಕ್ಟ್ರಿಕ್ ಸ್ಕೂಟರ್!

ಹೌದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಇತ್ತೀಚೆಗೆ ಪ್ರಕಟಿಸಿರುವ ಆದೇಶದ ಮೇರೆಗೆ ಪಡಿತರ ಚೀಟಿಯ ಅಕ್ಕಿ ಅಂದರೆ ರೇಷನ್ ಅಕ್ಕಿ  ಅಥವಾ ಇತರ ಆಹಾರಧಾನ್ಯಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವರನ್ನು ಪತ್ತೆ ಹಚ್ಚಿ ರೇಷನ್ ಕಾರ್ಡ್ ರದ್ದು ಮಾಡುವುದು ಎಂದು ತಿಳಿಸಿದೆ.

ಪಡಿತರ ವಿತರಣೆಯಲ್ಲಿ ನಿಯಮಾವಳಿ ಉಲ್ಲಂಘಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೆ ರಾಜ್ಯ ಸರ್ಕಾರ: 

Ration Card
Ration Card

ಹೌದು ರಾಜ್ಯ ಸರ್ಕಾರವೇ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಯಲ್ಲಿ ಯಾವುದೇ ಅಕ್ರಮ ನಡೆಯಬಾರದು ಎಂದು  ಸರ್ಕಾರದ ಸ್ಪಷ್ಟ ಸೂಚನೆ ನೀಡಿದೆ ಇದರ ಅನ್ವಯ ಸಾರ್ವಜನಿಕರಿಗೆ ಕಡಿಮೆ ಅಕ್ಕಿ ದೊರಕಿದರೆ ಅಥವಾ ರೇಷನ್ ನಲ್ಲಿ ಯಾವುದೇ ಅಕ್ರಮ ನಡೆಯುತ್ತಿದೆ ಎಂಬ ಅನುಮಾನ ಇದ್ದರೆ ತಕ್ಷಣವೇ ದೂರು ಸಲ್ಲಿಸಬಹುದು.

ರೇಷನ್ ವಿತರಣೆಯ ಕುರಿತಂತೆ ಯಾವುದೇ ದೂರು ಸಲ್ಲಿಸಲು ಸರ್ಕಾರ ಸಾರ್ವಜನಿಕರಿಗೆ ಉಚಿತ ದೂರವಾಣಿ ಸಂಖ್ಯೆ 1967 ಅನ್ನು ನೀಡಿದೆ. ಇಷ್ಟೇ ಅಲ್ಲದೆ ಸಹಾಯವಾಗಲೆಂದು ಪ್ರತ್ಯಕ್ಷ ದೂರುಗಳನ್ನು ತಹಶೀಲ್ದಾರ ಕಚೇರಿ ಮತ್ತು ಆಹಾರ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಗೆ ನೀಡಬಹುದು ಎಂದು ತಿಳಿಸಿದ್ದಾರೆ.

 DBT ಸ್ಥಗಿತ ಹೊಸ ಪೂರಕ ಅಕ್ಕಿ ವಿತರಣಾ ಯೋಜನೆ ನೇರವಾಗಿ:

ರಾಜ್ಯ ಸರ್ಕಾರ 2025ರ ಫೆಬ್ರವರಿಯಿಂದ ಪಡಿತರ ಚೀಟಿದಾರರಿಗೆ (DBT) ನೀಡುವ ವ್ಯವಸ್ಥೆಯನ್ನು ಸಗಿತಗೊಳಿಸಿ ಇದರ ಬದಲು ನೇರವಾಗಿ ಪಡಿತರ ಅಕ್ಕಿ ವಿತರಿಸಲು ನಿರ್ಧರಿಸಿದೆ. 

ಇಲ್ಲಿಯವರೆಗೆ ಅಂತ್ಯೋದಯ ಅನ್ನ ಯೋಜನೆ (AAY) ಮತ್ತು BPL ಹೊಂದಿರುವ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ಮೂಲಕ 5 ಕೆಜಿ ಆಹಾರಧಾನ್ಯ (NFSA) ಅಡಿಯಲ್ಲಿ ಲಭ್ಯವಿತ್ತು. 

ಹೌದು ಇದನ್ನು ಪೂರಕವಾಗಿ ರಾಜ್ಯ ಸರ್ಕಾರ ಪ್ರತಿ ಫಲಾನುಭವಿಗೆ 5 ಕೆಜಿಯಂತೆ  ₹34 ಪ್ರತಿ ಕೆಜಿ ಒಟ್ಟು 170 ರೂಪಾಯಿ) ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿತ್ತು ಈ ಮೊದಲು ಆದರೆ 2025ರ ಮಾರ್ಚ್ ತಿಂಗಳಿನಿಂದ ಈ ಯೋಜನೆ ರದ್ದುಪಡಿಸಲಾಗಿದ್ದು, ಪಡಿತರಧಾರರಿಗೆ ನೇರವಾಗಿ ಉಚಿತ ಅಕ್ಕಿ ವಿತರಣೆ ಮಾಡಲಾಗುವುದು.

ಹೊಸ ಪಡಿತರ ವಿತರಣಾ ನಿಯಮಗಳು 2025:

ಇದರ ಮೇಲೆ ಕ್ಲಿಕ್ ಮಾಡಿ ಓದಿ:ಚಿನ್ನದ ಬೆಲೆಯಲ್ಲಿ ಬಂಪರ್ ಇಳಿಕೆ! ಇಂದಿನ ಚಿನ್ನ-ಬೆಳ್ಳಿ ದರ ಇಲ್ಲಿದೆ.!

ಕರ್ನಾಟಕ ರಾಜ್ಯ ಸರ್ಕಾರದ ತಿರ್ಮಾನದ ಪ್ರಕಾರ, ಪಡಿತರ ಚೀಟಿಯ ಪ್ರಕಾರ ಹಂಚಿಕೆಯ ಪ್ರಮಾಣವನ್ನು ಈ ಕೆಳಗಿನಂತೆ ತಿಳಿಸಲಾಗಿದೆ.

  • ಬಿಪಿಎಲ್ ಪಡಿತರ ಚೀಟಿದಾರರಿಗೆ (BPL)  ಪ್ರತಿ ಸದಸ್ಯನಿಗೆ 15 ಕೆಜಿ ಉಚಿತ ಅಕ್ಕಿ ನೀಡಲಾಗುವುದು.
  • ಅಂತ್ಯೋದಯ ಪಡಿತರ ಚೀಟಿದಾರರಿಗೆ (AAY) ಇಲ್ಲಿ ಕುಟುಂಬದ ಸದಸ್ಯರ ಸಂಖ್ಯೆಯ ಆಧಾರದ ಮೇಲೆ ಹೆಚ್ಚುವರಿ ಅಕ್ಕಿ ವಿತರಣೆ ಮಾಡುತ್ತಾರೆ.

ವಿತರಣೆ ಅಡಿಯಲ್ಲಿ ಈ ಎಲ್ಲಾ ಹೊಸ ನಿಯಮಗಳು  2025ರ ಮಾರ್ಚ್ ತಿಂಗಳಿನಿಂದಲೇ ಜಾರಿ ಆಗಲಿವೆ.

ಪಡಿತರ ವಿತರಣೆಯಲ್ಲಿ ನಿಯಂತ್ರಣದ ಕಟ್ಟುನಿಟ್ಟಿನ ಕ್ರಮ ಜಾರಿ:

  • ರಾಜ್ಯ ಸರ್ಕಾರ ಈಗ ಪಡಿತರ ವಿತರಣೆಯ ಮೇಲೆ ಕಠಿಣ ನಿಯಂತ್ರಣ ಜಾರಿಗೊಳಿಸಿದೆ.
  • ಪಡಿತರ ಚೀಟಿದಾರರು ತಮ್ಮ ಪಾಲಿನ ಆಹಾರಧಾನ್ಯವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಅಂದರೆ ಹಣಕ್ಕೆ ರೇಷನ್ ಅಕ್ಕಿ ಮಾರಾಟ ಮಾಡಿದರೆ ಅವರ ಪಡಿತರ ಚೀಟಿ ರದ್ದುಪಡಿಸಲಾಗುವುದು.
  • ಅಕ್ರಮವಾಗಿ ರೇಷನ್ ಕಾರ್ಡ್ ಹೊಂದಿದವರಿಗೆ ರೇಷನ್ ಕಾರ್ಡ್ ತಿದ್ದುಪಡಿಸಲಾಗುವುದು.

ಸರ್ಕಾರ ಪಡಿತರ ವಿತರಣೆಯಲ್ಲಿ ಹೊಸ ನಿಯಮಗಳ ಪ್ರಮುಖ ಅಂಶಗಳು:

  • 2025ರಿಂದ DBT ರದ್ಧತಿ ಮಾಡಿ ಪಡಿತರ ಅಕ್ಕಿಯ ನೇರ ವಿತರಣಾ ವ್ಯವಸ್ಥೆ ಜಾರಿ.
  • BPL ಪಡಿತರ ಚೀಟಿದಾರರಿಗೆ ಪ್ರತಿ ಸದಸ್ಯನಿಗೆ 15 ಕೆಜಿ ಉಚಿತ ಅಕ್ಕಿ.
  • ಅಂತ್ಯೋದಯ ಪಡಿತರ ಚೀಟಿದಾರರಿಗೆ ಕುಟುಂಬದ ಸದಸ್ಯರ ಲೆಕ್ಕದ ಮೇರೆಗೆ ಹೆಚ್ಚುವರಿ ಅಕ್ಕಿ ವಿತರಣೆ.
  • ನ್ಯಾಯಬೆಲೆ ಅಂಗಡಿಗಳಲ್ಲಿ ಉಚಿತ ರೇಶನ್ ಅಕ್ಕಿ ನೀಡುವಾಗ ಯಾವುದೇ ತರಹದ ಅಕ್ರಮ ನಡೆಯದಂತೆ ಕಟ್ಟುನಿಟ್ಟಿನ ನಿಯಂತ್ರಣ ಜಾರಿ.
  • ನೀವೇನಾದರೂ ಪಡಿತರ ಅಂಗಡಿ ಇಂದ ರೇಷನ್ ಖರೀದಿಸಿ ಹಣಕ್ಕೆ ರೇಷನ್ ಅಕ್ಕಿ ಮಾಡಿದರೆ ನಿಮ್ಮ ರೇಷನ್ ಕಾರ್ಡ್ ರದ್ದುಪಡಿಸಲಾಗುವುದು.  

 ಕಿವಿಮಾತು:

ರಾಜ್ಯ ಸರ್ಕಾರ ಮುಖ್ಯವಾಗಿ ಉತ್ತವಾಗಿ ಅಕ್ಕಿ ನೀಡುವುದು ಒಂದು ಯೋಜನೆಯಾಗಿದೆ ಇದರಿಂದ ಬಡವರಿಗೆ ಬಹಳ ಸಹಾಯ ಆಗುತ್ತೆ ಒಂದು ಆರ್ಥಿಕ ಬೆಂಬಲ ನೀಡುತ್ತೆ ಇದರಿಂದ ಬಡವರ ಮನೆ ನಡೆಯುತ್ತೆ ಹೀಗಾಗಿ ನೀವೇನಾದರೂ ಹಣದಾಸೆಗೆ ರೇಷನ್ ಅಕ್ಕಿ ಕಮ್ಮಿ ಮಾಡಿ ಕಾಳಸಂತೆಯಲ್ಲಿ ಕೇಜಿಗೆ ಇಂತಿಷ್ಟು ಹಣ ಅಂತ ಮಾಡಿ ಮಾರಾಟ ಮಾಡಲು ಮುಂದಾದರೆ ನೀವೇನಾದರೂ ಸಿಕ್ಕಿಹಾಕಿಕೊಂಡಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದು ಮಾಡಲಾಗುವುದು. 

 ಇದಕ್ಕಾಗಿ ರಾಜ್ಯ ಸರ್ಕಾರ ಹೊಸ ರೂಲ್ಸ್ ಗಳನ್ನ ಜಾರಿಗೆ ತರುತ್ತದೆ ಇರುತ್ತೆ ಪಡಿತರ ವಿತರಣೆ ಅಡಿಯಲ್ಲಿ ಹಾಗೂ ಪಡಿತರಿಗೆ ಯಾವುದೇ ತರಹದ ತೊಂದರೆ ಆಗದಿರಲಿ ಇಂತಹ ಕಷ್ಟಕ್ಕೆ ಮತ್ತು ಕೆಟ್ಟ ಕೆಲಸಕ್ಕೆ ಕೈ ಹಾಕದೆ ಇರಲಿ ಇಂತಹ ಕೆಲಸ ಗೋಸ್ಕರ ರಾಜ್ಯ ಸರ್ಕಾರ ಹೊಸ ರೂಲ್ಸ್ ತರುತ್ತಲೇ ಇರುತ್ತೆ. 

WhatsApp Group Join Now
Telegram Group Join Now

Leave a Comment

WhatsApp Logo Join WhatsApp Group!