ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) 2025ನೇ ಸಾಲಿನ 2ನೇ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಏಪ್ರಿಲ್ 2025ರಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದೆ.
ವಿಜ್ಞಾನ, ವಾಣಿಜ್ಯ, ಮತ್ತು ಕಲಾ ಎಲ್ಲ ವಿಭಾಗದ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ ಮೂಲಕ ಪರಿಶೀಲಿಸಬಹುದು. ಬನ್ನಿ ತಡ ಮಾಡದೆ ಇಂದಿನ ಈ ಲೇಖನದಲ್ಲಿ ನಾವು karnataka 2nd puc result 2025 ತಿಳಿದುಕೊಂಡು ಬರೋಣ.
ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2025 ಪ್ರಮುಖ ವಿವರಗಳು:

ಪರೀಕ್ಷೆ ಹೆಸರು | karnataka 2nd Exam 2025 |
ಸಂಸ್ಥೆ | ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) |
ವಿಬಾಗ | ವಿಜ್ಞಾನ, ವಾಣಿಜ್ಯ, ಕಲಾ |
ಫಲಿತಾಂಶ ದಿನಾಂಕ | ಏಪ್ರಿಲ್ 2025 |
ಅಧಿಕೃತ ವೆಬ್‌ಸೈಟ್ | karresults.nic.in |
ಉತ್ತೀರ್ಣ ಪ್ರಮಾಣ | ಪ್ರತಿ ವಿಷಯದಲ್ಲಿ ಕನಿಷ್ಠ 35% |
ಮಾರ್ಕ್ಶೀಟ್ | ಎಪ್ರಿಲ್ – ಮೇ |
ಗ್ರೇಡಿಂಗ್ ಪದ್ಧತಿ | A+(90-100), A (80-89), B+ (70-79), В (60-69), C+ (50-59), C (35-49), D (<35 ಕಡಿಮೆ ಬಂದರೆ ಫೇಲ್) |
ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2025 ಹೇಗೆ ಚೆಕ್ ಮಾಡಬೇಕು?
1. ಅಧಿಕೃತ ವೆಬ್‌ಸೈಟ್ ಮೂಲಕ ಮಾಡಬಹುದು
- https://karresults.nic.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿರಿ.
- ನಂತರ ನಿಮಗಿಲ್ಲಿ Karnataka Secondary Education Examination Board. ಎಂಬ ಒಂದು ಸಿಗುತ್ತೆ, ಆದರೆ ಕೆಳಗಡೆ 2nd PUC Exam (I) 2025’ ಆಯ್ಕೆ ಮಾಡಿ.
- ನಿಮ್ಮ ನೋಂದಣಿ ಸಂಖ್ಯೆ ಮತ್ತು ನಮೂದಿಸಿ.
- ‘Submit’ ಕ್ಲಿಕ್ ಮಾಡಿದ ನಂತರ ನಿಮ್ಮ ರಿಸಲ್ಟ್ ಕಾಣತ್ತೆ.
ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ 2025 ಉತ್ತೀರ್ಣತೆಯ ನಿಯಮಗಳು:
ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಸ್ ಆಗಲು ಪ್ರತಿ ವಿಷಯದಲ್ಲಿ ಕನಿಷ್ಠ 35% ಅಂಕಗಳನ್ನು ಪಡೆಯಬೇಕಾಗುತ್ತದೆ. ಇದು ಸಿದ್ಧಾಂತ ಅಂದರೆ (theory) ಮತ್ತು ಪ್ರಾಯೋಗಿಕ (practical) ಪರೀಕ್ಷೆಗಳಿಗೂ ಪ್ರತ್ಯೇಕವಾಗಿ ಅನ್ವಯಿಸುತ್ತದೆ ಹೀಗಾಗಿ ಗಮನವಿಟ್ಟು ಓದಿ.
ಸಿದ್ಧಾಂತ (theory) ಪರೀಕ್ಷೆಯ ಉತ್ತೀರ್ಣತೆ ಅಂಕಗಳು:
- 80 ಅಂಕಗಳ ವಿಷಯಗಳಿಗೆ → ಕನಿಷ್ಠ 28 ಅಂಕ ಅಗತ್ಯ.
- 70 ಅಂಕಗಳ ವಿಷಯಗಳಿಗೆ → ಕನಿಷ್ಠ 24 ಅಂಕ ಅಗತ್ಯ.
- 100 ಅಂಕಗಳ ವಿಷಯಗಳು (ಉದಾ: ಗಣಿತ) → ಕನಿಷ್ಠ 35 ಅಂಕ ಅಗತ್ಯ.
ಪ್ರಾಯೋಗಿಕ ಪರೀಕ್ಷೆಯ ಉತ್ತೀರ್ಣತೆ ಅಂಕಗಳು
- 20 ಅಂಕಗಳ ಪ್ರಾಯೋಗಿಕ ಪರೀಕ್ಷೆಗೆ → ಕನಿಷ್ಠ 7 ಅಂಕ ಅಗತ್ಯ.
- 30 ಅಂಕಗಳ ಪ್ರಾಯೋಗಿಕ ಪರೀಕ್ಷೆಗೆ → ಕನಿಷ್ಠ 11 ಅಂಕ ಅಗತ್ಯ.
ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2025 ಗ್ರೇಡಿಂಗ್ ಪದ್ಧತಿ:
ಗ್ರೇಡ್ | ಅಂಕಗಳ ಶ್ರೇಣಿ |
A+ | 90-100 |
A | 80-89 |
B+ | 70-79 |
B | 60-69 |
C+ | 50-59 |
C | 35-49 |
D | 35ಕ್ಕಿಂತ ಕಡಿಮೆ (ಫೇಲ್) |