ನಿಮಗೆಲ್ಲ ತಿಳಿದಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದೆ. ಇಂಧನ ಬೆಲೆ ಏರಿಕೆ, ಪರಿಸರ ಸ್ನೇಹಿ ವಾಹನಗಳ ಮಹತ್ವ ಮತ್ತು ತಂತ್ರಜ್ಞಾನ ಅಭಿವೃದ್ಧಿಯೊಂದಿಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳು ಜನಪ್ರಿಯತೆ ಗಳಿಸುತ್ತಿವೆ.
ಇದರ ನಡುವೆ TVS iQube ST ಎಲೆಕ್ಟ್ರಿಕ್ ಸ್ಕೂಟರ್ ಹೊಸ ಮಾದರಿಯೊಂದಿಗೆ ಲಭ್ಯವಿದೆ.

ಈ ಲೇಖನದಲ್ಲಿ TVS iQube ST ಎಲೆಕ್ಟ್ರಿಕ್ ಸ್ಕೂಟರ್‌ನ ಪ್ರಮುಖ ವಿಶೇಷತೆಗಳು, ಬೆಲೆ, ಮೈಲೇಜ್, EMI ಆಯ್ಕೆಗಳು, ಬ್ಯಾಟರಿ ಸಾಮರ್ಥ್ಯ, ಮತ್ತು ಶೋರೂಮ್ ಖರೀದಿ ವಿವರಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಲಾಗಿದೆ.
TVS iQube ST ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳು:
TVS iQube ST ಎಲೆಕ್ಟ್ರಿಕ್ ಸ್ಕೂಟರ್ ಒಂದು ಒಳ್ಳೆ ಆಧುನಿಕ ತಂತ್ರಜ್ಞಾನ ಮತ್ತು ವಿಶೇಷತೆಗಳನ್ನು ಒಳಗೊಂಡಿದೆ , ಇದನ್ನು ನಾವು ಕೆಳಗಿನಂತೆ ಒದಗಿಸಿದ್ದೇವೆ ಗಮನಿಸಿ:
- ಬ್ಲೂಟೂತ್ ಕನೆಕ್ಟಿವಿಟಿ ಸ್ಮಾರ್ಟ್‌ಫೋನ್ ಜೊತೆಗೆ ಸಂಪರ್ಕಿಸಲು ಅವಕಾಶ.
- ನ್ಯಾವಿಗೇಶನ್ ಸಿಸ್ಟಮ್
- ಡಿಜಿಟಲ್ ಡಿಸ್ಪ್ಲೇ 17.78 cm TFT ಡಿಸ್ಪ್ಲೇ.
- ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಸ್ಮಾರ್ಟ್‌ಫೋನ್ ಚಾರ್ಜಿಂಗ್‌ಗಾಗಿ.
- 30 ಲೀಟರ್ ಒಳಗಿನ ಸೀಟ್ ಸ್ಟೋರೇಜ್ ಹೆಚ್ಚು ಭದ್ರತೆ ಮತ್ತು ಹೆಚ್ಚುವರಿ ಸಾಮರ್ಥ್ಯ.
- ಎಲ್‌ಇಡಿ ಹೆಡ್‌ಲೈಟ್ ಉತ್ತಮ ಬೆಳಕು ಮತ್ತು ಚಲಾಯಿಸುವಾಗ ಎದುರಿನ ರೋಡ್ ಕಾಣುತ್ತೆ ಸರಿಯಾಗಿ.
- ಅಡ್ವಾನ್ಸ್ ಸೆಫ್ಟಿ ಫೀಚರ್ಸ್ – ಲೋ ಬ್ಯಾಟರಿ ಇಂಡಿಕೇಟರ್, ಆಂಟಿ-ತೆಫ್ಟ್ ಅಲಾರ್ಮ್, ಮತ್ತು ರಿಯಲ್-ಟೈಮ್ ಮೈಲೇಜ್ ಇಂಡಿಕೇಟರ್.
TVS iQube ST ಎಲೆಕ್ಟ್ರಿಕ್ ಸ್ಕೂಟರ್ ಸ್ಪೀಡ್, ಮೈಲೇಜ್ ಮತ್ತು ಬ್ಯಾಟರಿ:
- ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ 100 ಕಿಲೋಮೀಟರ್ ಮೈಲೇಜ್ ಕೊಡುತ್ತೆ.
- ಮ್ಯಾಕ್ಸಿಮಮ್ ಸ್ಪೀಡ್ ಪ್ರತಿ ಗಂಟೆಗೆ 78 Km/h.
- ಮೋಟಾರ್ ಸಾಮರ್ಥ್ಯ 3kW IP67 ವಾಟರ್‌ಪ್ರೂಫ್ BLDC HUB ಮೋಟಾರ್.
- ಟಾರ್ಕ್ 140 Nm.
- ಬ್ಯಾಟರಿ ಸಾಮರ್ಥ್ಯ 3.4kWh ಲಿಥಿಯಂ-ಐಯಾನ್ ಬ್ಯಾಟರಿ.
TVS iQube ST ಎಲೆಕ್ಟ್ರಿಕ್ ಸ್ಕೂಟರ್ ಸಸ್ಪೆನ್ಷನ್ ಮತ್ತು ಬ್ರೇಕಿಂಗ್ ಸಿಸ್ಟಮ್
- ಮುಂಭಾಗದಲ್ಲಿ – ಟೆಲಿಸ್ಕೋಪಿಕ್ ಸಸ್ಪೆನ್ಷನ್.
- ಹಿಂಭಾಗದಲ್ಲಿ – ಹೈಡ್ರಾಲಿಕ್ ಟ್ವಿನ್ ಟ್ಯೂಬ್ ಶಾಕ್ ಅಬ್ಸಾರ್ಬರ್.
- ಬ್ರೇಕಿಂಗ್ ಸಿಸ್ಟಮ್ – ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್.
TVS iQube ST ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಮತ್ತು EMI ಆಯ್ಕೆಗಳು
- ಎಕ್ಸ್-ಶೋರೂಮ್ ಬೆಲೆ – ₹1.46 ಲಕ್ಷ ರಿಂದ ₹1.85 ಲಕ್ಷ.
- ಕನಿಷ್ಟ ಡೌನ್ ಪೇಮೆಂಟ್ – ₹15,000.
- ಬ್ಯಾಂಕ್ ಸಾಲ ಲಭ್ಯತೆ – 9.7% ಬಡ್ಡಿದರದಲ್ಲಿ ಲಭ್ಯ.
- EMI ಆಯ್ಕೆ – 3 ವರ್ಷಗಳವರೆಗೆ ಪ್ರತಿ ತಿಂಗಳು ₹4,381 EMI ಪಾವತಿ ಮಾಡುತ್ತಾ ಹೋಗಬೇಕು.
TVS iQube ST ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಹೇಗೆ ಮಾಡಬಹುದು?
ಈ ಸ್ಕೂಟರ್‌ನ್ನು ಖರೀದಿ ಮಾಡಲು TVS ಶೋರೂಮ್ ಗೆ ಭೇಟಿ ನೀಡಬಹುದು ಅಥವಾ ಅಧಿಕೃತ ವೆಬ್‌ಸೈಟ್ ಮುಖಾಂತರ ಬುಕ್ ಮಾಡಬಹುದು.
ಹಾಗೆ 15000 ರೂಪಾಯಿಗೆ ಖರೀದಿಸಲು ಫೈನಾನ್ಸ್ ಆಯ್ಕೆ ಮಾಡಿಕೊಳ್ಳಬೇಕು ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಡೀಲರ್‌ನ್ನು ಸಂಪರ್ಕಿಸುವುದು ಉತ್ತಮ.
ಕೊನೆ ಮಾತು:
TVS iQube ST ಎಲೆಕ್ಟ್ರಿಕ್ ಸ್ಕೂಟರ್ ಆಧುನಿಕ ತಂತ್ರಜ್ಞಾನ, ಉತ್ತಮ ಮೈಲೇಜ್, ಮತ್ತು ಆಕರ್ಷಕ EMI ಯೋಜನೆಯೊಂದಿಗೆ ಲಭ್ಯವಿದೆ. ಯಾರು ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಯೋಚಿಸುತ್ತಿರುವರೋ, ಅವರಿಗಾಗಿ ಇದು ಉತ್ತಮ ಆಯ್ಕೆ ಎಂದು ಹೇಳಬಹುದು.
ನೀವೇನಾದರೂ ಉತ್ಸುಕರಾಗಿದ್ದರೆ ಈ ಸ್ಕೂಟರ್ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ಶೋರೂಮ್ ಅಥವಾ TVS ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಬಹುದು.